2017 ಬಿಟ್‌ಕಾಯಿನ್ ಹೆಚ್ಚು

ವೇದೋsಖಿಲೋ ಧರ್ಮ ಮೂಲಮ್

ಇದು ಮನುಸ್ಮೃತಿಯ ಒಂದು ಶ್ಲೋಕಭಾರತೀಯ ಸಂಸ್ಕೃತಿಯ ಮೂಲಾಧಾರವೇ ವೇದಗಳುಶಿಕ್ಷಣ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ ಎಂಬ ಷಟ್ ಶಾಸ್ತ್ರಗಳಲ್ಲಿ 'ವ್ಯಾಕರಣ'ವೇ ವೇದಪುರುಷನ ಮುಖ, ಜ್ಯೋತಿಷವು ಆತನ ಕಣ್ಣುಗಳು, ವ್ಯಕ್ತಿಯು ಎಷ್ಟೇ ಸುಂದರನಾಗಿದ್ದರೂ ಕಣ್ಣುಗಳಿಲ್ಲದಿದ್ದರೆ ಆತ ಹೇಗೆ ಪರಿಪೂರ್ಣನಲ್ಲವೋ, ಅದೇ ರೀತಿ ಎಲ್ಲಾ ಶಾಸ್ತ್ರಗಳ ಅಧ್ಯಯನ ಮಾಡಿಯೂ ಜ್ಯೋತಿಷವನ್ನು ಅಭ್ಯಸಿಸದಿದ್ದರೆ ಕಲಿಕೆ ಪರಿಪೂರ್ಣವಾಗಲಾರದುಅದಕ್ಕೇ ಜ್ಯೋತಿ ಎಂಬ ಶಬ್ದಕ್ಕೆ ಬೆಳಕು, ನಕ್ಷತ್ರ, ಸೂರ್ಯ, ಕಣ್ಣು ಎಂಬಿತ್ಯಾದಿ ಅರ್ಥಗಳಿವೆಅಜ್ಞಾನ ಎಂಬ ಕತ್ತಲನ್ನು ಹೊಡೆದೋಡಿಸಿ ಜ್ಞಾನ ಎಂಬ ಬೆಳಕನ್ನು ತೋರಿಸುವ ವಿಜ್ಞಾನವೇ ಜ್ಯೋತಿಷ. ಜ್ಯೋತಿಷ ಶಾಸ್ತ್ರದ ಸತ್ಯಾಸತ್ಯತೆಯನ್ನು ವಿಮರ್ಷಿಸುವುದಕ್ಕಿಂತಲೂ, ಇದರಿಂದ ನಮಗೆ ಎಷ್ಟು ಪ್ರಯೋಜನವಾಗುತ್ತದೆ ಎಂಬುವುದನ್ನು ತಿಳಿದುಕೊಳ್ಳುವುದು ಜಾಣತನವಲ್ಲವೇ.. ?

ಇನ್ನು ವಾಸ್ತು ಇದು ಮನುಕುಲಕ್ಕೆ ಭಾರತೀಯ ಶಾಸ್ತ್ರ, ಸಂಪ್ರದಾಯಗಳ ಇನ್ನೊಂದು ಮಹತ್ತರ ಕೊಡುಗೆ,  'ಹಿತ್ತಲ ಗಿಡ ಮದ್ದಲ್ಲ' ಎನ್ನುವ ನಮ್ಮ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ಬಿಟ್ಟು ಅಧ್ಯಯನ ಶೀಲರಾಗಿ ಗಮನಿಸಿದರೆ, ವಾಸ್ತುಬದ್ದ ರೀತಿಯಲ್ಲಿ - ಶಾಸ್ತ್ರಕ್ಕನುಗುಣವಾಗಿ ಕಟ್ಟಿರುವ ಕಟ್ಟಡಗಳ  ಆಯುಷ್ಯ ಅಭಿವೃದ್ಧಿ, ಸಕರಾತ್ಮಕ ಶಕ್ತಿಗಳ ಸಂಚಯ ಎಷ್ಟು ಉನ್ನತವಾಗಿದೆ ಎಂಬುವುದನ್ನು ಗಮನಿಸಬಹುದು. ಅದೇ ರೀತಿ ವಾಸ್ತುವಿಗೆ ವಿರುದ್ದವಾಗಿ ಕಟ್ಟಿದ ಮನೆಗಳ ಅವನತಿಯನ್ನೂ ತಿಳಿಯಬಹುದು. ಇಷ್ಟಕ್ಕೂ, 'ವಾಸ್ತು' ಎನ್ನುವುದು ಭೂಮಿಯ ಸಮತೋಲನವನ್ನು ಕಾಪಾಡಿಕೊಂಡು ಪಂಚಭೂತಗಳ ಸಕಾರಾತ್ಮಕ ಶಕ್ತಿಯನ್ನು ನಮ್ಮೆಡೆಗೆ ಆಕರ್ಷಿಸುವ ಒಂದು ವಿಜ್ಞಾನ ಅಷ್ಟೆ.

ಅದೇ ರೀತಿ ಸಂಖ್ಯಾಶಾಸ್ತ್ರ, ಭೃಗುನಾಡೀ ಜ್ಯೋತಿಷ, ಪಿರಮಿಡ್ ವಾಸ್ತು, ಹೀಗೆ ಜ್ಞಾನಗಳು ಅನೇಕ ರೀತಿಯದಾಗಿದ್ದರೂ ಅದರ ಮೂಲ ಶೋಧಿಸುವ ವಿಚಾರವನ್ನು ಬಿಟ್ಟು ಅದನ್ನು ಕಲಿತುಕೊಳ್ಳುವ ಜ್ಞಾನದಾಹಿಗಳು ನಾವು (ಜ್ಯೋತಿಷಮಿತ್ರ ತಂಡ).  ಹಾಗೆಯೇ ನಾವು ಕಲಿತುಕೊಂಡಿರುವುದನ್ನು ನಮ್ಮೊಳಗೆ ಬಚ್ಚಿಟ್ಟುಕೊಳ್ಳದೇ ಕಲಿಕಾಸ್ತರಿಗೆ ಹಂಚುವ, ಮೂಲಕ ನಮ್ಮ ಭಾರತೀಯ ಪುರಾತನ ವೈಜ್ಞಾನಿಕ ವಿದ್ಯೆಗಳನ್ನು ಜಗದಗಲ ಪಸರಿಸಿ ತಾಯಿ ಭಾರತಾಂಬೆಯೇ ಮೊದಲ ವಿಶ್ವಗುರು' ಎಂದು ಪ್ರಪಂಚಕ್ಕೆ ತಿಳಿಸುವ ಆಶಯ ನಮ್ಮದು.

 ಬನ್ನಿ..... ನಮ್ಮ ಜತೆ ಕೈಜೋಡಿಸಿ..... ಒಟ್ಟಾಗಿ ನಮ್ಮ ಸನಾತನ ಸತ್ ಚಿಂತನೆಯನ್ನು ವಿಶ್ವ ವ್ಯಾಪಿಯಾಗಿಸೋಣ ಅದುವೇ......

'ವಸುದಾ ಏವ ಕುಟುಂಬಕಂ'